TTE Ticket: ಇನ್ನುಮುಂದೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಕೂಡ ಪ್ರಯಾಣ ಮಾಡಬಹುದು, ರೈಲು ಪ್ರಯಾಣಿಕರಿಗೆ ಹೊಸ ಸೇವೆ

ಈ ನಿಯಮದ ಪ್ರಕಾರ ರೈಲಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ಅಗತ್ಯ ಇಲ್ಲ

Travel Without Ticket In Indian Railways: ಇತೀಚಿಗೆ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೇ ಯಾಕೆಂದರೆ ರೈಲು ಪ್ರಯಾಣ ಸುರಕ್ಷಿತವಾಗಿರುತ್ತದೆ ಎಂಬ ಕಾರಣಕ್ಕೆ. ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಹೊಸ ಹೊಸ ಸೌಲಭ್ಯವನ್ನು ಜಾರಿಗೆ ತರುತ್ತಿದೆ ಅದರಂತೆ ಈಗ ಇನ್ನೊಂದು ಹೊಸ ಸೌಲಭ್ಯವನ್ನು ಜಾರಿಗೆ ತಂದಿದ್ದು, ಇದು ಜನ ಸಾಮಾನ್ಯರಿಗೆ ಬಹಳ ಸಹಾಯಕ ಆಗುವುದಂತೂ ಖಚಿತ.

ಯಾಕೆಂದರೆ ರೈಲಿನಲ್ಲಿ ಪ್ರಯಾಣ ಮಾಡಬೇಕೆಂದರೆ ಟಿಕೆಟ್ ಖರೀದಿಸುವುದೇ ದೊಡ್ಡ ತಲೆ ನೋವಿನ ಸಂಗತಿ ಆಗಿದೆ ಆದರೆ ಇನ್ನುಮುಂದೆ ಟಿಕೆಟ್ ಪಡೆಯದೆಯೇ ನೀವು ರೈಲು ಹತ್ತಬಹುದಾಗಿದೆ ಹಾಗಿದ್ರೆ ಏನಿದು ಹೊಸ ನಿಯಮ ತಿಳಿಯೋಣ.

Indian Railway Rules
Image Credit: Herzindagi

ರೈಲು ಟಿಕೆಟ್ ಪಡೆಯದೇ ರೈಲು ಹತ್ತಬಹುದು

ಅಪರಾಧ ತನಿಖಾ ಬ್ಯೂರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತೀಯ ರೈಲ್ವೇಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಹಂಚಿಕೊಂಡಿದೆ. ಇನ್ನುಮುಂದೆ ಅವಶ್ಯಕೆತೆ ಬಂದರೆ ಟಿಕೆಟ್ ಖರೀದಿಸದೆಯೇ ರೈಲು ಹತ್ತಬಹುದಾಗಿದೆ. ರೈಲು ಹೊರಡುವ ಸಮಯ ಬಂದಾಗ, ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವಾಗದಿದ್ದಾಗ ಖಂಡಿತವಾಗಿ ನೀವು ಹೋಗಬೇಕಾದ ರೈಲನ್ನು ಹತ್ತಬಹುದಾಗಿದೆ. ಆದರೆ ರೈಲು ಹತ್ತಿದ ನಂತರ ಕಡ್ಡಾಯವಾಗಿ ರೈಲಿನ TTE ಯಿಂದ ಟಿಕೆಟ್ ಪಡೆಯತಕ್ಕದ್ದಾಗಿದೆ .

ಟಿಟಿಇಯಿಂದ ಟಿಕೆಟ್ ಖರೀದಿಸಲು ಅವಕಾಶ

Join Nadunudi News WhatsApp Group

ರೈಲು ಹತ್ತುವಾಗ ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ನೀವು ರೈಲು ಹತ್ತಿದ ಕೂಡಲೇ TTE ಯನ್ನು ಸಂಪರ್ಕಿಸಿ ನಿಮ್ಮ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕು. ಆಗ ಮಾತ್ರ ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ನಿಮ್ಮ ಟಿಕೆಟ್ ಅನ್ನು TTE ಯಿಂದ ಪಡೆಯಬಹುದು.

ಈ ಸೌಲಭ್ಯದ ಅಡಿಯಲ್ಲಿ TTE ಬಳಿ ಹ್ಯಾಂಡ್ ಹೆಲ್ಡ್ ಮಿಶಿನ್ ಇದ್ದು, ಇದರ ಸಹಾಯದಿಂದ TTE ರೈಲಿನೊಳಗೆ ಪ್ರಯಾಣಿಕರಿಗೆ ಟಿಕೆಟ್ ನೀಡಲಿದ್ದಾರೆ. ನೆನಪಿರಲಿ ನೀವು ಮೊದಲೇ ಟಿಕೆಟ್ ಪಡೆಯದೆ ಇದ್ದಲ್ಲಿ 250 ರೂಪಾಯಿ ದಂಡ ಮತ್ತು ನೀವು ರೈಲು ಹತ್ತಿದ ಸ್ಥಳದಿಂದ ಗಮ್ಯಸ್ಥಾನಕ್ಕೆ ಪ್ರಯಾಣ ದರವನ್ನು ಪಾವತಿಸಬೇಕು.

Travel Without Ticket In Indian Railways
Image Credit: Business League

ಟಿಕೆಟ್ ಪಡೆಯಲು ಹಾಗು ಟಿಕೆಟ್ ಕನ್ಫರ್ಮ್ ಮಾಡಿಸಲೂ ಸಾಧ್ಯ

TTE ಬಳಿ ಇರುವ ಮೆಷಿನ್ ಅನ್ನು ರೈಲ್ವೇ ಪ್ರಯಾಣಿಕರ ರಿಸರ್ವೇಶನ್ ಸಿಸ್ಟಮ್ ಸರ್ವರ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ. ಪ್ರಯಾಣಿಕರು ಟಿಕೆಟ್ ಪಡೆಯಲು ಯಂತ್ರದಲ್ಲಿ ಹೆಸರು ಮತ್ತು ಸ್ಥಳವನ್ನು ನಮೂದಿಸಿದ ತಕ್ಷಣ ಟಿಕೆಟ್ ಹೊರಬರುತ್ತದೆ.

ಈ ಮೆಷಿನ್ ಮೂಲಕ ರೈಲಿನಲ್ಲಿ ಖಾಲಿ ಇರುವ ಬರ್ತ್‌ಗಳ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಯಾವುದೇ ಪ್ರಯಾಣಿಕರ ವೇಟಿಂಗ್ ಲಿಸ್ಟ್ ಕ್ಲಿಯರ್ ಆಗದೇ ಇದ್ದಲ್ಲಿ TTE ಬಳಿ ಹೋಗಿ ಟಿಕೆಟ್ ತೋರಿಸಿ ಖಾಲಿ ಇರುವ ಸೀಟಿನ ಮಾಹಿತಿ ಪಡೆದು ಕನ್ಫರ್ಮ್ ಮಾಡಿಕೊಳ್ಳಬಹುದು. ಸೀಟು ಖಾಲಿಯಿದ್ದರೆ ಅಥವಾ ಯಾವುದೇ ಸೀಟಿನಲ್ಲಿ ಪ್ರಯಾಣಿಕರು ಬರದಿದ್ದರೆ TTE ನಿಮಗೆ ಆ ಬರ್ತ್ ಅನ್ನು ನೀಡುತ್ತಾರೆ.

Join Nadunudi News WhatsApp Group