Jio India: 365 ದಿನ ಉಚಿತ ಕರೆ ಮತ್ತು ನಿತ್ಯ 2GB ಡೇಟಾ, ಎರಡು ವಾರ್ಷಿಕ ರಿಚಾರ್ಜ್ ಘೋಷಿಸಿದ ಜಿಯೋ.

ಜಿಯೋ ತನ್ನ ಗ್ರಾಹಕರಿಗೆ ಎರಡು ರೀತಿಯ ವಾರ್ಷಿಕ ಯೋಜನೆಯನ್ನು ಬಿಡುಗಡೆ ಮಾಡಿದೆ.

Jio Annual Recharge Plans: ಇತ್ತೀಚಿಗೆ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ. ವಿವಿಧ ಟೆಲಿಕಾಂ ಕಂಪನಿಗಳು ವಿಭಿನ್ನ ರೀತಿಯ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪೆನಿಯಾದ ಜಿಯೋ (Jio)ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಗ್ರಾಹಕರನ್ನು ಸೆಳೆಯುತ್ತಿದೆ.

ಓಟಿಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡಲು ಜಿಯೋ ಜಿಯೋ ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಯು ಗ್ರಾಹಕರಿಗೆ ತಿಂಗಳ ರಿಚಾರ್ಜ್ ಅನ್ನು ತಪ್ಪಿಸಲಿದೆ. ಜಿಯೋ ಕಂಪನಿ ಬಿಡುಗಡೆಗೊಳಿಸಿರುವ ಈ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿಯೋಣ.

Jio 2999 Rs. recharge plan
Image Credit: haribhoomi

ಜಿಯೋ 2,999 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು.

ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ 912.5GB ಡೇಟಾವನ್ನು ಇಡುತ್ತದೆ. ಪ್ರತಿ ನಿತ್ಯ 2 .5GB ಡೇಟಾ ಲಭ್ಯವಿರುವ ಕಾರಣ ಹೆಚ್ಚಿನ ಡೇಟಾವನ್ನು ಬಳಸಲು ಅವಕಾಶವಿದೆ.

ಜಿಯೋ 2879 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 2,879 ರೂ. ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ರೂ. 2,879 ರಿಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯ ಜೊತೆಗೆ ಅನ್ಲಿಮಿಟೆಡ್ ಕರೆಯ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Jio 2879 Rs. recharge plan
Image Credit: haribhoomi

ಪ್ರತಿನಿತ್ಯ 2GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಜಿಯೋದಲ್ಲಿ ಇದೀಗ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಲಭ್ಯ
ಜಿಯೋ ತನ್ನ ಗ್ರಾಹಕರಿಗಾಗಿ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,545 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿನಿತ್ಯ 1.5GB ಡೇಟಾ ಜೊತೆಗೆ 100 SMS ಹಾಗೂ ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು. ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group