Jio Data: ಈಗ ರಿಚಾರ್ಜ್ ಇಲ್ಲದೆ ಇಂಟರ್ನೆಟ್ ಬಳಸಬಹುದು, JIO ಗ್ರಾಹಕರಿಗೆ ದೊಡ್ಡ ಕೊಡುಗೆ.

ಇಂಟರ್ನೆಟ್ ಇಲ್ಲದೆ ಇದ್ದರೆ ಎಮರ್ಜೆನ್ಸಿ ಡೇಟಾ ಮೂಲಕ ಈಗ ಜಿಯೋ ಇಂಟರ್ನೆಟ್ ಬಳಸಬಹುದಾಗಿದೆ.

Jio Emergency Data Voucher Offer: ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ (Jio) ಇದೀಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಂತೂ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ತಮ್ಮ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ.

Jio internet can now be used through emergency data if there is no internet.
Image Credit: livemint

ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ
ಇದೀಗ ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ ಲಭಿಸಿದೆ. ನೀವು ಜಿಯೋ ಗ್ರಾಹಕರಾಗಿದ್ದರೆ ಇನ್ನುಮುಂದೆ ರಿಚಾರ್ಜ್ ಇಲ್ಲದೆಯೂ ಕೂಡ ಇಂಟರ್ನೆಟ್ ಅನ್ನು ಬಳಸಬಹುದು. ಜಿಯೋ ಗ್ರಾಹಕರು ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ಜಿಯೋ ತುರ್ತು ಡೇಟಾ ವೋಚರ್
ರಿಚಾರ್ಜ್ ಇಲ್ಲದೆಯೂ ಕೂಡ ಇಂಟರ್ನೆಟ್ ಅನ್ನು ಬಳಸಲು ನೀವು ತುರ್ತು ಡೇಟಾ ವೋಚರ್ ಅನ್ನು ಆಯ್ಕೆ ಮಾಡಬೇಕು. ತುರ್ತು ಡೇಟಾ ವೋಚರ್ ಪಡೆಯುವುದು ಹೇಗೆ ಎಂದು ತಿಳಿಯೋಣ.

Jio has now announced an Emergency Data Voucher plan to help customers in times of need.
Image Credit: telecomtalk

*ನಿಮ್ಮ ಮೊಬೈಲ್ ಫೋನ್ ನಲ್ಲಿ MyJio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ಫೋನ್ ಸಂಖ್ಯೆ ಮತ್ತು OTP ನಮೂದಿಸಿ ಲಾಗಿನ್ ಮಾಡಿಕೊಳ್ಳಿ.

*ಅಪ್ಲಿಕೇಶನ್ ತೆರೆದಾಗ ‘ಇನ್ನಷ್ಟು’ ಆಯ್ಕೆಯನ್ನು ಆರಿಸಿ, ನಂತರ ‘ಡೇಟಾ ವೋಚರ್’ ಆಯ್ಕೆ ಮಾಡಿ.

Join Nadunudi News WhatsApp Group

*ಅಲ್ಲಿ ತುರ್ತು ಡೇಟಾ ವೋಚರ್ ಆಯ್ಕೆಯನ್ನು ಆರಿಸಿ, ವಿವಿಧ ಡೇಟಾ ಪ್ಯಾಕ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.

Know how to activate Jio Emergency Data.
Image Credit: navbharattimes.indiatimes

*ನೀವು ಆಯ್ಕೆ ಮಾಡಿದ ಡೇಟಾ ಪ್ಯಾಕ್ ಅನ್ನು ಆರಿಸಿದ ನಂತರ ‘ಖರೀದಿ’ ಮೇಲೆ ಕ್ಲಿಕ್ ಮಾಡಿ.

*ನಿಮ್ಮ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು OTP ಅನ್ನು ನಮೂದಿಸಬೇಕಾಗುತ್ತದೆ.

*OTP ಸಲ್ಲಿಸಿದ ನಂತರ ತುರ್ತು ಡೇಟಾ ಪ್ಯಾಕ್ ನಿಮ್ಮ ಜಿಯೋ ಸಂಖ್ಯೆಯಲ್ಲಿ ಸಕ್ರಿಯವಾಗುತ್ತದೆ.

Join Nadunudi News WhatsApp Group