Jio India: 11 ತಿಂಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಜಿಯೋ, ಅನಿಯಮಿತ ಕರೆ ಮತ್ತು ಡೇಟಾ.

11 ತಿಂಗಳ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಈಗ ಜಿಯೋ ತನ್ನ ಗ್ರಾಹಕರಿಗೆ ಪರಿಚಯಿಸಿದೆ.

Jio 11 Month Recharge Plan: ಜಿಯೋ (Jio) ಗ್ರಾಹಕರಿಗೆ ಹೊಸ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಅತಿ ಅಗ್ಗದ ರಿಚಾರ್ಜ್ ಪ್ಲ್ಯಾನ್ ಒಂದು ಜಿಯೋ ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ.

ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುತ್ತಾ ಇರುತ್ತದೆ ಮತ್ತು ಜಿಯೋ ಗ್ರಾಹಕರು ಹೊಸ ಹೊಸ ಅಗ್ಗದ ಬೆಲೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಉಪಯೋಗಿಸಿಕೊಳ್ಳುತ್ತಾರೆ. ಸದ್ಯ ತನ್ನ ರಿಚಾರ್ಜ್ ಪ್ಲ್ಯಾನ್ ಕೆಲವು ಬದಲಾವಣೆ ಜಾರಿಗೆ ತಂದಿರುವ ಜಿಯೋ ಈಗ ಹೊಸ ರಿಚಾರ್ಜ್ ಗಳನ್ನ ಬಿಡುಗಡೆ ಮಾಡಿದೆ. 

Jio has now introduced a new recharge plan of 11 months to its customers.
Image Credit: hindustantimes

ಜಿಯೋ ಹೊಸ ರಿಚಾರ್ಜ್ ಯೋಜನೆ
ಜಿಯೋ ಕಂಪನಿ ಈಗಾಗಲೇ ಸಾಕಷ್ಟು ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದೀಗ ಅಗ್ಗದ ಬೆಲೆಯಲ್ಲಿ ಹೆಚ್ಚು ಉಪಯೋಗವಾಗುವ ಹೊಸ ರಿಚಾರ್ಜ್ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದೆ. ಜಿಯೋ ಈ ರಿಚಾರ್ಜ್ ಯೋಜನೆಯಿಂದ ಬಳಕೆದಾರರಿಗೆ ಅಧಿಕವಾಗಿ ಲಾಭ ಆಗಲಿದೆ. ಅತಿ ಅಗ್ಗದ ಬೆಲೆಯಲ್ಲಿ ನೀವು ಹಲವು ಪ್ರಯೋಜನಗಳನ್ನು ಪಡೆದು ಆನಂದಿಸಬಹುದು.

ಜಿಯೋ 895 ರೂಪಾಯಿ ರಿಚಾರ್ಜ್ ಯೋಜನೆ
ಜಿಯೋ ಕಂಪನಿ 895 ರೂಪಾಯಿಯ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ವಿಶೇಷತೆ ಏನೆಂದರೆ ಜಿಯೊದ 895 ಯೋಜನೆಯಿಂದ 336 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ.

Jio has now launched a new recharge plan of 11 months with free calling and unlimited data
Image Credit: abplive

ಈ ಜಿಯೋ ಪ್ರೀಪೈಡ್ ಪ್ಲ್ಯಾನ್ 11 ತಿಂಗಳವರೆಗೆ ಇರುತ್ತದೆ. ಪ್ರತಿ 28 ದಿನಗಳ ವರೆಗೆ 2GB ಹೈ ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ ಮತ್ತು ಈ ಯೋಜನೆಯ ಚಂದಾದಾರರು 12 ಬಾರಿ ಅದೇ ಪ್ರಯೋಜನವನ್ನು ಪಡೆಯುತ್ತಾರೆ. ಇನ್ನು ಸ್ಮಾರ್ಟ್ ಫೋನ್ ಬಳಕೆದಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

Join Nadunudi News WhatsApp Group

ಹೌದು ಜಿಯೋ ಫೋನ್ ಹೊಂದಿರುವ ಬಳಕೆದಾದರೂ ಮಾತ್ರ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಿಯೋ ಫೋನ್ ಬಳಸುವವರಿಗಾಗಿ ಮಾತ್ರ ಈ ಹೊಸ ಯೋಜನೆಯನ್ನ ಜಿಯೋ ಬಿಡುಗಡೆ ಮಾಡಿದೆ.

Join Nadunudi News WhatsApp Group