Reliance Jio: 75 ರೂಪಾಯಿಯ ಅಗ್ಗದ ಯೋಜನೆ ಜಾರಿಗೆ ತಂದ ಜಿಯೋ, ಉಚಿತ ಕರೆ ಮತ್ತು ಡೇಟಾ.

75 ರೂಪಾಯಿಗಳ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಜಿಯೋ.

Reliance Jio 75 Rupees Recharge: ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಜಿಯೋ (Jio) ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ಗ್ರಾಹಕರಿಗಾಗಿ ಜಿಯೋ ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಳೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುತ್ತಿದೆ.

ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಕೇವಲ 75 ರೂನಲ್ಲಿ ಗ್ರಾಹಕರಿಗೆ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಲಿದೆ. ಇನ್ನು ಜಿಯೋ ಈ ಹೊಸ ರಿಚಾರ್ಜ್ ಪ್ಲ್ಯಾನ್ ಯಾರಿಗೆಲ್ಲ ಸಿಗಲಿದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Jio has announced a low-cost recharge plan of Rs 75.
Image Credit: theneweconomy

75 ರೂ. ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ ಅಂತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಆದರೆ ಜಿಯೋನ ಎಲ್ಲಾ ಗ್ರಾಹಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಜಿಯೋ ಫೋನ್ ಗ್ರಾಹಕರು (Jio Phone Users) ಮಾತ್ರ ಈ ಹೊಸ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

23 ದಿನಗಳ ಮಾನ್ಯತೆಯ ಹೊಸ ರಿಚಾರ್ಜ್ ಪ್ಲ್ಯಾನ್
ಜಿಯೋ ಫೋನ್ ಗ್ರಾಹಕರು 75 ರೂ. ರಿಚಾರ್ಜ್ ಮಾಡುದರಿಂದ 23 ದಿನಗಳವರೆಗೆ ಮಾನ್ಯತೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಕರೆ, ಉಚಿತ SMS ಮತ್ತು ಇಂಟೆರ್ ನೆಟ್ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ರಿಲಯನ್ಸ್ ಜಿಯೊದ ಈ 75 ರೂ ರಿಚಾರ್ಜ್ ಪ್ಲ್ಯಾನ್ ಜಿಯೋ ಫೋನ್ ಗ್ರಾಹಕರಿಗೆ ಮಾತ್ರ ಸೀಮಿತವಾಗಿರುತ್ತದೆ.

Jio announced Rs 75 recharge plan with 23 days validity
Image Credit: theprint

ಜಿಯೋ 75 ರೂ. ಯೋಜನೆಯ ಪ್ರಯೋಜನಗಳು
ಜಿಯೋ ರಿಲಯನ್ಸ್ ನ 75 ರೂ ರಿಚಾರ್ಜ್ ನಿಂದಾಗಿ ನೀವು ದಿನಕ್ಕೆ 0.1 MB ಡೇಟಾವನ್ನು ಪಡೆಯಬಹುದು. ಡೇಟಾ ಜೊತೆಗೆ ಹೆಚ್ಚುವರಿಯಾಗಿ 200 MB ಗಳನ್ನೂ ನೀಡಲಾಗುತ್ತದೆ. ಡೇಟಾ ಜೊತೆಗೆ ಅನಿಯಮಿತ ಕರೆ, ಮತ್ತು 50 SMS ಗಳು ಉಚಿತವಾಗಿ ಲಭ್ಯವಿದೆ. ಈ 75 ರೀ ಯೋಜನೆಯು ನಿಮಗೆ 23 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group